Sunday, 17 March 2013

ಸಿನಿಮಾವೊಂದು ಏನು ಮಾಡಬಲ್ಲದು ..?


           ಸಿನಿಮಾವೊಂದು ಏನು ಮಾಡಬಲ್ಲದು ..?

 
ನೂರಾರು   ಸಿನಿಮಾಗಳನ್ನು ನೋಡಿರುವ ನಾವುಗಳೇ ಅಂತರವಲೋಕನ  ಮಾಡಿಕೊಂಡಾಗ  ಇಂದು  ಜಾಗತಿಕ ಜನಪ್ರಿಯ  ಸಮೂಹ  ಮಾಧ್ಯಮ ವಾಗಿರುವ ಸಿನಿಮಾ  ನಮ್ಮ ಮೇಲೆ ಎಂತಹ ಪ್ರಭಾವ ಬೀ ರಿದೆ . ಅದರಿಂದ ಎಂತಹ  ಬದಲಾವನೆಯನ್ನು ನಿರೀಕ್ಸಿಸಿದ್ದೆವು ,,? ಇನ್ದೆನಾಗಿದೆ  ?  ಎಂದು  ವಿವೆಚಿಸಿದಾಗ ಅನೇಖ ವು  ಋಣಾತ್ಮಕ .ಕೆಲವೇ ಧನಾತ್ಮಕ  ಪರಿಣ್ಹಾಮಗಲಾಗಿರುವ ಉತ್ತರ ನಮಗೆ  ಸಿಗುತ್ತದೆ . ಏಕೆ  ಹೀಗಾಯಿತು ?
 
 ಮೊನ್ನೆ ಕಾಸರವಳ್ಳಿ ಯವರ   'ಕೂರ್ಮವತಾರ  'ಸಿನಿಮಾ  ನೋಡಿದಾಗ  ಅಲ್ಲಿ ಗಾಂದಿವಾದವೆ  ಇಂದಿನ  ಯುವಕರಿಗೆ  ಸವಕಲು ಬೋದನೆಯಾಗಿ ಕಾಣುತ್ತಿರುವ  ಬಗ್ಗೆ ಚಿತ್ರಿಸಲಾಗಿದೆ . , ಗಾಂದಿವಾದವಿರಲಿ , ಯಾವುದೇ ಒಳ್ಳೆತನವೋ ಇಂದು ಅಷ್ಟಾಗಿ ಬೇಕಾಗಿಲ್ಲವೆಂದು ಹೇಳಲಾಗಿದೆ .ಬದುಕಿಗೆ ದುಡ್ಡು ಬೇಕು ಅದಕೊಂದು ಮಾರ್ಗ ಬೇಕು  ಅಷ್ಟೇ . ಅಲ್ಲಿ ಮೌಲ್ಫ್ಯ , ನೀತಿ ,ನಿಯಮ ನಗಣ್ಯ ಎನ್ನುವ ಕಾಲ ತಲುಪಿರುವ ನಮ್ಮ ಮಾಹಿತಿ  ಜಗತ್ತಿನ ಮುಂದಿನ ದಿನಗಳನ್ನು ನೆನೆದರೆ  ಮತ್ತಷ್ಟು ಸಾಮೂಹಿಕ ಅತ್ಯಾಕಾರಿಗಳು , ಉಗ್ರರು , ಧರ್ಮಾನ್ದರು ಎಲ್ಲೆಡೆ ಹೆಚಾಗುವ ಲಕ್ಷಣಗಳೇ ಕಾಣಿಸುತ್ತಿವೆ .

                  ನೈತಿಕತೆಯನ್ನೇ ಹೊತ್ತು ಬೋದಿಸುವ ದರ್ಮಶಾಲೆಗಳ,   ಪುಸ್ತಕಗಳ ಶಿಕ್ಸಕರ , ಶಾಲೆಗಳ ಶ್ರಮ ಎಲ್ಲಿ ಸೊರಿಕೆಯಾಯಿತು  ?  ಕಲಾತ್ಮಕ , ವ್ಯಾಪಾರಿ  ಸಿನಿಮಾಗಳ  ಮುಕ  ಹೊತ್ತು ಬರುವ ಸಿನಿಮಾಗಳು ಏನೆಲ್ಲಾ ಬದಲಾವಣೆ  ತರಲು ಸಾಧ್ಯವಿತ್ತು  ಆದರೆ ಅದೇಕೆ ಸದ್ಯವಾಗುತ್ತಿಲ್ಲ , ಬದ್ದತೆಯ ಕೊರತೆಗೆ ಕಾರಣವೇನು  ?  ಜಗತ್ತೆ   ಅನೈತಿಕತೆ , ಅಂದಾಚಾರದ ಬಲೆಯಲ್ಲಿ  ಬಿದ್ದಿರಲು   ಮೇಲೆತ್ತುವವರಾರು ?  ಇದೇ ಬದುಕೆಂದು ಕೊಂಡು ,ಸುಮ್ಮನಾಗಬೇಕೆ  ?


        ಸಾಮಾಜಿಕ ಜವಾಬ್ದಾರಿ  ಅರಿತು ಮುನ್ನಡೆಯಬೀಕಾಗಿರುವ  ಮಾಧ್ಯಮ , ಸರ್ಕಾರದ ಕೆಲವು ನಿರ್ದಾರಗಳು ಜಾಗತಿಕ ಸಂಸ್ಕೃತಿಯ ಹೆಸರಲ್ಲಿ ಎದ್ದ  ಪಾಶ್ಚಿಮಾತ್ಯರ ಮಕ್ಕಿಕಾ ಮಕ್ಕಿ ಅನುಕರಣೆ  ಎಲ್ಲವು ದೊಡ್ಡ ಹೊಡೆತವನ್ನೇ ನೀಡಿವೆ ಎಂದರೆ  ತಪ್ಪಾಗಲಾರದು . ಸಮಾಜದ ಸುದಾರಣೆ ಹೆಸರಲ್ಲಿ ಬಂದ ನೂರಾರು
 ಚ ಳುವಲಿಗಳು , ಹೋರಾಟಗಾರರು , ಪುಸ್ತಕಗಳು ಇತಿಹಾಸ ಮಾತ್ರ , ಇಂದು ಹಗರಣಗಳ , ಸಮೂಹಿಕ ಅತ್ಯಾಚಾರಿಗಳ , ಉಗ್ರರು ವರ್ತಮಾನದಲ್ಲಿದ್ದು  ಅವರ ಕ್ರೋರಮುಖಗಳೇ ನಮ್ಮ ಮಕ್ಕಳಿಗೆ ಪ್ರೇರಣೆ , ಪ್ರಚೋದನೆಗೆ ಆಹಾರವಾಗಬಲ್ಲ ಅಪಾಯಕಾರಿ ಸನ್ನಿವೇಶ ದಲ್ಲಿದ್ದೇವೆ . ಹಿಗೆರಲು  ಈ ಸಿನಿಮಾ ಮಾಧ್ಯಮವು ಹಣ ಮಾಡುವ ದಂದೆಯವರ ಕೈಲಿ ಸಿಕ್ಕು ದಾರಿ ತಪ್ಪಿ ಎಲ್ಲರನ್ನು ಬ್ರಮಲೋಕದತ್ತ್ಮಾ  ಕರೆದುಯ್ದು ಕತ್ತಲೆ ಯಲ್ಲಿ ಎಲ್ಲವನ್ನು ತೋರಿಸಿ ಜಗತ್ತನೂ ಕತ್ತೆಲೆಗೆ ತಳ್ಳಲು ಬೇಕಾದ ವೇದಿಕೆಗೆ ಪೂರಕವಾಗುತ್ತಿರುವುದು ಶೋಚನೀಯ ....
            
  ಗೋಳದಲ್ಲಿ  ಮನುಜನ ಬಾಳು ,
 ಬರಿ    ಗೋ ಳು ..
 ಬೊದನೆ , ಸಿನಿಮಾ , ನೀತಿ , ಪುಸ್ತಕ ಎಲ್ಲ ,... ಓಳು ..
ಹೊಳಾಗುತ್ತಿದೆ.
              

No comments:

Post a Comment