ಓಡುವ 'ಉಗ್ರ'ನೊಂದಿಗೆ ಓಡಿದರೆ ಹೊಸತನದ ಅನಾವಣ ಮಾಡಿಸುವ "ಉಗ್ರಂ "ಟ್ರೈಲರ್ ನಲ್ಲೇ ಕಾಡಿದ ಉಗ್ರ ಟಾಕೀಸಿನಲ್ಲು ಕಾಡುತ್ತಾನೆ . ಬೆಚ್ಚಿ ಬೀಳಿಸುತ್ತಾನೆ .ನಮ್ಮೆದೆಯಲ್ಲಿ ಉಗ್ರ ಸ್ವರೂಪಿಯಾಗಿ ಕುಂತುಬಿಡುತಾನೆ. ಕ್ರೌರ್ಯವನ್ನು ಇಷ್ಟ ಪಡುವವರಿಗೆ ಪ್ರೆರಕನಾಗುತ್ತಾನೆ. ಇಡೀ ಟಾಕೀಸು ಕ್ರೌರ್ಯದಲೆಯಲ್ಲಿ ಮಿನ್ದೆಳುತ್ತದೆ .ಆಗೀಗ ಕೊಂಚಾ ಮನಸು ಹಗುರಾಗಲು ಕೇಳಿಸಿಕೊಳ್ಳಬಹುದಾದ ಹಾಡುಗಳಲಿ ನಾಯಕ ನಾಯಕಿ ಮುದ್ದಾಗಿ ಲವಲವಿಕೆ ಮೂಡಿಸಿ ಸುಮ್ಮನಾಗುತಾರೆ .ಕ್ಯಾಮರಾ ಪ್ರೇಕ್ಷಕನನ್ನು ಕ್ರೌರ್ಯಮಾಯೆ ಯಾ ಲೋಕಕ್ಕೆ ಯಶಸ್ವಿಯಾಗಿ ಕರೆದೊಯ್ಯುತ್ತದೆ. ನಾಯಕ ಹೆಚ್ಚು ಮಾತಾಡದೆ ಮಾಡಿ ತೋರಿಸುವ ಉಗ್ರ ಸ್ವರೂಪಿ ಕರ್ಮವೀರ ,ಹೊಸತನದೊಂದಿಗೆ ಮನರಂಜಿಸುತ್ತಾನೆ. ಒಮ್ಮೆ ನೋಡಲೇಬೇಕಾದ ಸಾಕಷ್ಟು ಹೊಸತನ ಕ್ಕೆ ನಟ ಮುರುಳಿ ,ನಿರ್ದೇಶಕ ಪ್ರಶಾಂತ್ ನೀಲ್ ಅವರು ಮತ್ತು ಅವರ ತಂಡ ಪ್ರಯತ್ನಿಸಿದೆ . ಅವರಿಂದ ಮುಂದೆ ಮತ್ತಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು .ನೀವೂ ಒಮ್ಮೆ ನೋಡಿ ಕಮೆಂಟ್ ಮಾಡಿ .( ನೋಡದೆ ಸುಮ್ನೆ ಏನೂ ಹೇಳಬೇಡಿ ...).