![]() |
ಎಲ್ಲ ಭಾಷೆಯ ಸಿನಿಮಾಗಳ್ಳನ್ನು ಬೆಂಬಲಿಸೋಣ ,ನಮ್ಮ ಬಾಷೆಯನ್ನು ಬೆಳೆಸೋಣ , ನಮಗೆ ನಮ್ಮದೇ ಮಾರುಕಟ್ಟೆ , ನಮ್ಮ ಕಲಾವಿದರಿಗೆ , ನಮ್ಮವರ ಸೃಜನಶೀಲತೆಗೆ ನಮ್ಮದೇ ಮಾರುಕಟ್ಟೆ ಬೆಳೆಸೋಣ , ನಮ್ಮವರು ತಪ್ಪು ಮಾಡಿದರೆ ಕಳಪೆ ಸಿನಿಮಾ ಮಾಡಿದರೆ ತಿದ್ದೂಣ, ಆದರೆ ಯಾವುದೂ ಬಾಷೆಯ ಜನರ ಸಿನಿಮಾವನ್ನು ನೀರವಾಗಿ ದಬ್ಬಿನ್ಗ್ಫ್ ಮಾಡಿ ನಮ್ಮವರ ಹಕ್ಕನ್ನು ಕಸಿದು ಕಾಲಿ ಕುಉರಿಸುವುದು ಸಲ್ಲದು.
ನಮ್ಮ ಹಣ , ನಮ್ಮ ಮನರಂಜನೆಯ ಬಯಕೆ , ನಮ್ಮ ಆಯ್ಕೆ ಎಂದು ಸ್ವಾರ್ಥಿಗಳಾಗಿ ಯೋಚಿಸಿ ನಮ್ಮವರ ಸೃಜನಶೀಲತೆಗೆ ವೇ ದಿಕೆಯಿಲ್ಲದಂತೆ ಮಾಡಿದರೆ ಮುಂದೆ ನಮ್ಮ ಸ್ವನ್ತಿಕೆಯೇ ನಾಶವಾಗಿ ಬಿಡುತ್ತದೆ .
ನಮ್ಮತನವಿಲ್ಲದ್ದು ಮರಳುಗಾಡಿನ ಬದುಕಾಗಿ ಬಿಡುತ್ತದೆ , ನಮ್ಮವರೊಂದಿಗಿಲ್ಲದ ವಿದೇಶಿ ಬದುಕಿನ ಒಂಟಿ ಶೂನ್ಯತೆ ಕಾಡುತ್ತದೆ . ಬಾವನೆ ಬೆತ್ತಲಾದನ್ತೆನಿಸುತ್ತ್ದೆ . ಈಗಾಗಲೇ ಜಾಗತಿಕ ಭಾಷೆಗಳಿಂದ ತತ್ತರಿಸುತ್ತಿರುವ ನಮ್ಮ ಕನ್ನಡವಾಗಲಿ , ನಮ್ಮ ದೇಶದ ಯಾವುದೀ ಪ್ರಾದೇಶಿಕ ಭಾಷೆಯಾಗಲಿ , ಸಿನಿಮಾ ಸಂಸ್ಕ್ರುತಿ ಉಳಿಯಬ್ಬೆಕಾದರೆ ಆಯಾ ಭಾಷೆಯಲ್ಲಿಯೀ ಸೃಜನಶೀಲ ಅಭಿವ್ಯಕ್ತಿ ನಡೆದರೆ ಮಾತ್ರ ಅದು ಉತ್ಕೃಷ್ಟ ಮತ್ತದ್ದಾಗಿರಲು ಸಾದ್ಯ .ಹಾಗಾಗಿ ನಾವು ಆಯಾ ಭಾಷೆಯ ಸಿನಿಮಾವನ್ನು ಆಯಾ ಭಾಷೆಯಲ್ಲಿಯೀ ನೂಡು ವುದೊಳಿತು .ಹಾಗು ಸಿನಿಮಾರಂಗ ದೊಡ್ಡ , ಉದ್ಯಮವಾಗಿದ್ದು ,ಇದರಿಂದಾಗುವ ಹಣಕಾಸಿನ ವಹಿವಾಟು ನಮ್ಮಲ್ಲೇ , ನಮ್ಮವರಿಗೇ ಲಾಭವಾಗುವಂತೆ ಮಾಡಿ ಪ್ರೂತ್ಸಾಹಿಸಬೀಕಿದೆ . ನಮ್ಮವರ ಉದ್ಯಮವನ್ನು ಮೊದಲು ಪ್ರೋತ್ಸಾಹಿಸಬೀಕೆ ಹೊರತು ಪರನಾದಿನವರನ್ನಲ್ಲ .
ಈಗಾಗಲೇ ಬಂಡವಾಳಶಾಹಿಗಳು ಬಾರತೀಯ ಕೈಗಾರಿಕೆ, ಮಾರುಕಟ್ಟೆ ಯನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿದ್ದು ನಮ್ಮ ರಾಜಕೀಯ ನಾಯಕರ ನಿಲು ವುಗಳನ್ನ ತಮ್ಮ ತಾಳಕ್ಕೆ ,ಅನುಕೂಲಕ್ಕೆ ತಕ್ಕಂತೆ ಕುಣಿಸುತ್ತಿರುವುದು ತಮಗೆಲ್ಲ ಗೊತ್ತಿದೆ , ನಮ್ಮ ಕನ್ನಡ ಸಿನೀಮಾ ಉದ್ಯಮ ಹಾಗಾಗದಿರಲಿ , ನಮ್ಮವರ ಉದ್ಯಮ ನಮ್ಮವರ ಹಿಡಿತದಲ್ಲೀ ಇರಲಿ . ನಮಗೆ ನಮ್ಮದೇ ಕನ್ನಡ ಕಂಪಿನ ಸೃಜನ ಸಿನಿಮಾಗಳು ಬರಲಿ .


