ಕನ್ನಡಿಗರೇಕೆ ಅನ್ಯ ಭಾಷಾ ಸಿನಿಮಾಗಳತ್ತ ವಾಲುತ್ತಿದ್ದಾರೆ ,,?
ಎಲ್ಲಿಂದಲೋ ಎರವಲು ತಂದ ಕತೆಗಳನು ಸಿನಿಮಾ ಮಾಡುತ್ತಿದ್ದಾರೆ ಎಂದು ರೋಸಿ ಹೋಗಿದ್ದಾರೆಯೇ....?
ಎಲ್ಲಿಂದಲೋ ತಂದ ಕತೆಗಳನು ಸಿನಿಮಾ ಮಾಡುತ್ತಿದ್ದಾರೆ ಯಾಕೆ ? ಕನ್ನಡ ಚಿತ್ರ ಬರಹಗಾರರನ್ನು ಕಡೆಗಣಿಸಿ ಪರ ಚಿತ್ರ ಗಳನ್ನು ಪಾಪಿಮಾಡಿ ನಮ್ಮವರೇ ಚಿತ್ರ ರಂಗ ದಳಿವಿಗೆ ಕಾರಣವಾಗುತ್ತಿದಾರೆ ಎನಿಸುತ್ತಿದೆ . ನಿಮಗೆ ,,,? ಕಾಮೆಂಟ್ ಮಾಡಿ ಗೆಳೆಯರೇ ,, ನಮ್ಮ ಬ್ಲಾಗ್ ಸೇರಿಕೊಳ್ಳಿ ....ಬೆಂಬಲಿಸಿ ....
![]() |
ಕನ್ನಡಿಗರೇಕೆ ಅನ್ಯ ಭಾಷಾ ಸಿನಿಮಾಗಳತ್ತ ವಾಲುತ್ತಿದ್ದಾರೆ ,,? |
ನಮ್ಮ ನಾಯಕ ನಟರುಗಳೇ ಪರಭಾಷಾ ಸಿನಿಮಾಗಳತ್ತ ವಾಲುತ್ತಿದ್ದಾರೆ , ಎಲ್ಲಿಂದಲೋ ತಂದ ಕತೆಗಳನು ತಂದು ಸಿನಿಮಾ ಮಾಡುತ್ತಿದ್ದಾರೆ , ನಮ್ಮೆ ಲೇಖಕರನ್ನು , ಸಿನಿಮಾ ಬರಹಗಾರರನ್ನು ಸರಿಯಾಗಿ ದುಡಿಸಿಕೊಳ್ಳದೆ ಎರವಲು ತಂದ ಕತೆ ಗಳನ್ನೂ ಕಡಿಮೆ ಅವದಿಯಲ್ಲಿ ರೀಲು ಸುತ್ತಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುತಿದರಷ್ಟೇ,,! ಹಾಗಾಗಿ ನಮ್ಮ ಚಿತ್ರ ರಸಿಕರು ರೋಸಿ ಹೋಗಿ ನೇರವಾಗಿ ಪರಭಾಷಾ ಸಿನಿಮಾಗಳನ್ನೇ ನೋಡಿ ಬರುತಿದಾರೆ , ಹಾಗಾಗಿ ಎರವಲು ತಂದ ಕನ್ನಡ ಸಿನಿಮಾಗಳು ಸಾಲು ಗಟ್ಟಲೆ ಸೋಲುತ್ತಿವೆ . ಸದ್ಯ ಅಪ್ಪು ಸಿನಿಮಾಗಳು ಉತ್ತಮ , ದರ್ಶನ್ ಸಿನಿಮಾಗಳು ಪರವಾಗಿಲ್ಲ. ಶಿವಣ್ಣ ಆಯ್ಕೆ ಎಲ್ಲೋ ಮಿಸ್ ಹೊಡಿತಾ ಇದೆ , ಹೊಸಬರು ಯಾಕೋ ಮ್ಯಾಜಿಕ್ ಮಾಡಿ ಲಾಜಿಕ್ ಇಲ್ಲದೆ ಕಾಣಿಯಾಗುತ್ತಿದ್ದಾರೆ. ಬಟ್, ಸೂರಿ , ಜನರ ಅಭಿರುಚಿ ಬದಲಿಸಿ ಬಿಟ್ಟಿದಾರೆ , ಆದರೆ ಬದ್ದತೆಯ ಕೊರತೆ ಕಾಣುತ್ತಿದೆ . ರವಿಚಂದ್ರನ್ ಯಾಕೋ ಏಕಾಂಗಿ ಯಾಗೆ ಉಳಿಯುತ್ತಿದಾರೆ . ಪ್ರೇಮ ಲೋಕಕೆ ಎಂದು ಬರುತಾರೋ ಕಾಡು ನೋಡಬೇಕಿದೆ .
ಒಟ್ಟಿನಲ್ಲಿ ಚಿತ್ರ ಬರಹಗಾರಿಗೆ , ತಾಂತ್ರಿಕ ವರ್ಗಕ್ಕೆ ಉತ್ತಮ ವೇದಿಕೆ ರೂಪಿಸುವವರೆಗೂ ಕನ್ನಡ ಚಿತ್ರರಂಗ ಎರವಲು ಸಿನಿಮಾಗಳನ್ನೇ ನೆಚ್ಚಿಕೊಂಡು ಅಲೆದಾಡುತ್ತಾಲ್ಲೇ ಇರಬೇಕಾಗುತ್ತದೆ . ಮೊದಲು ಚಿತ್ರಕತೆ , ಕತೆಗೆ ಪ್ರಾಶಸ್ತ್ಯ , ನಂತರ ನಟರಿಗೆ ಎನ್ನುವ ಮಂತ್ರ ಪಾಲಿಸಲಿ , ಚಿತ್ರ ರಂಗ ತಂತಾನೇ ಬೆಳೆಯುತ್ತೆ , ಗುಣ ಮಟ್ಟ ಹೆಚ್ಚುತ್ತೆ , ಕನ್ನಡಿಗ ಕನ್ನಡ ಸಿನಿಮಾ ಗೆಲಿಸಿಯೀ ಗೆಲ್ಲಿಸುತಾನೆ , ಹೊಸತನಕೆ ಹೊಸ ಬೆಲೆ ಸಿಕ್ಕೆ ಸಿಗುತ್ತದೆ .



