Monday, 9 September 2013

ಕನ್ನಡಿಗರೇಕೆ ಅನ್ಯ ಭಾಷಾ ಸಿನಿಮಾಗಳತ್ತ ವಾಲುತ್ತಿದ್ದಾರೆ ,,?

             ಕನ್ನಡಿಗರೇಕೆ  ಅನ್ಯ ಭಾಷಾ  ಸಿನಿಮಾಗಳತ್ತ  ವಾಲುತ್ತಿದ್ದಾರೆ ,,?

ಎಲ್ಲಿಂದಲೋ  ಎರವಲು ತಂದ ಕತೆಗಳನು  ಸಿನಿಮಾ ಮಾಡುತ್ತಿದ್ದಾರೆ  ಎಂದು ರೋಸಿ ಹೋಗಿದ್ದಾರೆಯೇ....?

ಎಲ್ಲಿಂದಲೋ ತಂದ ಕತೆಗಳನು ಸಿನಿಮಾ ಮಾಡುತ್ತಿದ್ದಾರೆ ಯಾಕೆ ?  ಕನ್ನಡ ಚಿತ್ರ ಬರಹಗಾರರನ್ನು  ಕಡೆಗಣಿಸಿ  ಪರ ಚಿತ್ರ ಗಳನ್ನು ಪಾಪಿಮಾಡಿ  ನಮ್ಮವರೇ  ಚಿತ್ರ ರಂಗ ದಳಿವಿಗೆ  ಕಾರಣವಾಗುತ್ತಿದಾರೆ ಎನಿಸುತ್ತಿದೆ . ನಿಮಗೆ ,,,? ಕಾಮೆಂಟ್  ಮಾಡಿ ಗೆಳೆಯರೇ ,, ನಮ್ಮ ಬ್ಲಾಗ್  ಸೇರಿಕೊಳ್ಳಿ ....ಬೆಂಬಲಿಸಿ ....


ಕನ್ನಡಿಗರೇಕೆ  ಅನ್ಯ ಭಾಷಾ  ಸಿನಿಮಾಗಳತ್ತ  ವಾಲುತ್ತಿದ್ದಾರೆ ,,? 

                               ಇತ್ತೀಚಿನ  ಕನ್ನಡ ಸಿನಿಮಾಗಳ ಹೆಸರುಗಳ ನ್ನೇ  ಗಮನಿಸಿ ,  ಬಚ್ಚನ್ , ವಿಷ್ಣುವರ್ಧನ , ರಜನೀಕಾಂತ , ಅಂಬರೀಶ , ಇನ್ನೂ ಎನೀನೋ  ಹೆಸರುಗಳು ಹಟಮಾಡಿ  ರಿಜಿಸ್ಟ್ರಾರ್  ಆಗುತ್ತಿವೆ . ಗಾಸಿಪ್  ಎಬ್ಬಿಸುತ್ತಿವೆ , ಆಕ್ರೋಶಕ್ಕೆ ಗುರಿಯಾಗುತ್ತಿವೆ .ಹೆಸರನ್ನು ಇಡುವುದಕ್ಕೆ  ಕರ್ಚುಮಾಡುವ  ಬುದ್ದಿಯನ್ನು  ಚಿತ್ರಕಥೆ , ಊತ್ತಮ  ನಿರೂಪಣೆ , ನಿರ್ದೇಶನ, ತಾಂತ್ರಿಕತೆ  ಹೊಸತನಕ್ಕೆ  ಶ್ರಮಿಸಿದ್ದರೆ  ಕನ್ನಡ  ಚಿತ್ರರಂಗ  ಹಿಂದಿನಂತೆ  ಕಂಗೊಳಿಸುತ್ತಿತ್ತು .  ಸಿನಿಮಾ ಶೀರ್ಷಿಕೆ ಇಡುವಲ್ಲಿಯೂ  ಒದ್ದಾಡುತ್ತಿದ್ದಾರೆ. ಅಯ್ಕೆಯಲಿ ದ್ವಂದ್ವೆಕ್ಕೆ  ಬೀಳುತಿದ್ದಾರೆ ಯಾಕೆ ?  ಇಲ್ಲಿ ಚಿತ್ರ ಬರಹಗಾರರಿಗೆ  ಹೆಚ್ಚಿನ ಪ್ರಾಶಸ್ತ್ಯ  ನಿಡುವವರೆಗೂ  ಇದು ಹೀಗೇ ಮುಂದುವರಿಯುತ್ತದೆ.  ನಾಯಕ ನಟರ ೩೦ ,೪೦ ದಿನದ ಕಾಲಸಿಟ್ಗೆ  ಕೋಟಿ ಸುರಿಯೂ ನಿರ್ಮಾಪಕರು  ಚಿತ್ರ ಬರಹಗಾರರಿಗೆ  , ತಾಂತ್ರಿಕ ವರ್ಗದವರಿಗೆ  ಸಾವಿರಗಳ ಲೆಕ್ಕ ದಾಟದಂತೆ ಎಚ್ಚರ ವಹಿಸುತ್ತಾನೆ .ಕಾಡಿಸುತಾನೆ ,, ಇದೇ ಇಲ್ಲೇ  ಚಿತ್ರರಂಗ  ದಾರಿ ತಪ್ಪುತ್ತಿರುವುದು .ಇದು ಕನ್ನಡ  ಸಿನಿಮಾಗಳ  ಗುಣಮಟ್ಟದ  ಮೇಲೆ  ವ್ಯತಿರಿಕ್ತ  ಪರಿಣಾಮ  ಬೀರುತ್ತಿದೆ .
 ನಮ್ಮ ನಾಯಕ  ನಟರುಗಳೇ  ಪರಭಾಷಾ ಸಿನಿಮಾಗಳತ್ತ  ವಾಲುತ್ತಿದ್ದಾರೆ , ಎಲ್ಲಿಂದಲೋ ತಂದ ಕತೆಗಳನು  ತಂದು ಸಿನಿಮಾ ಮಾಡುತ್ತಿದ್ದಾರೆ , ನಮ್ಮೆ  ಲೇಖಕರನ್ನು , ಸಿನಿಮಾ  ಬರಹಗಾರರನ್ನು ಸರಿಯಾಗಿ ದುಡಿಸಿಕೊಳ್ಳದೆ  ಎರವಲು ತಂದ ಕತೆ ಗಳನ್ನೂ ಕಡಿಮೆ ಅವದಿಯಲ್ಲಿ ರೀಲು ಸುತ್ತಿ  ತಮ್ಮ  ಸ್ಥಾನ  ಗಟ್ಟಿ ಮಾಡಿಕೊಳ್ಳುತಿದರಷ್ಟೇ,,! ಹಾಗಾಗಿ  ನಮ್ಮ ಚಿತ್ರ ರಸಿಕರು  ರೋಸಿ ಹೋಗಿ  ನೇರವಾಗಿ ಪರಭಾಷಾ ಸಿನಿಮಾಗಳನ್ನೇ  ನೋಡಿ  ಬರುತಿದಾರೆ , ಹಾಗಾಗಿ ಎರವಲು ತಂದ  ಕನ್ನಡ ಸಿನಿಮಾಗಳು  ಸಾಲು ಗಟ್ಟಲೆ  ಸೋಲುತ್ತಿವೆ . ಸದ್ಯ  ಅಪ್ಪು  ಸಿನಿಮಾಗಳು  ಉತ್ತಮ , ದರ್ಶನ್  ಸಿನಿಮಾಗಳು  ಪರವಾಗಿಲ್ಲ. ಶಿವಣ್ಣ ಆಯ್ಕೆ ಎಲ್ಲೋ  ಮಿಸ್ ಹೊಡಿತಾ ಇದೆ , ಹೊಸಬರು  ಯಾಕೋ ಮ್ಯಾಜಿಕ್ ಮಾಡಿ  ಲಾಜಿಕ್ ಇಲ್ಲದೆ ಕಾಣಿಯಾಗುತ್ತಿದ್ದಾರೆ. ಬಟ್, ಸೂರಿ ,  ಜನರ ಅಭಿರುಚಿ  ಬದಲಿಸಿ ಬಿಟ್ಟಿದಾರೆ , ಆದರೆ ಬದ್ದತೆಯ  ಕೊರತೆ ಕಾಣುತ್ತಿದೆ . ರವಿಚಂದ್ರನ್  ಯಾಕೋ ಏಕಾಂಗಿ ಯಾಗೆ  ಉಳಿಯುತ್ತಿದಾರೆ . ಪ್ರೇಮ ಲೋಕಕೆ ಎಂದು ಬರುತಾರೋ ಕಾಡು ನೋಡಬೇಕಿದೆ .

                           ಒಟ್ಟಿನಲ್ಲಿ ಚಿತ್ರ ಬರಹಗಾರಿಗೆ , ತಾಂತ್ರಿಕ ವರ್ಗಕ್ಕೆ ಉತ್ತಮ ವೇದಿಕೆ ರೂಪಿಸುವವರೆಗೂ  ಕನ್ನಡ ಚಿತ್ರರಂಗ ಎರವಲು ಸಿನಿಮಾಗಳನ್ನೇ ನೆಚ್ಚಿಕೊಂಡು  ಅಲೆದಾಡುತ್ತಾಲ್ಲೇ ಇರಬೇಕಾಗುತ್ತದೆ . ಮೊದಲು  ಚಿತ್ರಕತೆ , ಕತೆಗೆ ಪ್ರಾಶಸ್ತ್ಯ , ನಂತರ ನಟರಿಗೆ ಎನ್ನುವ ಮಂತ್ರ ಪಾಲಿಸಲಿ  , ಚಿತ್ರ ರಂಗ ತಂತಾನೇ ಬೆಳೆಯುತ್ತೆ , ಗುಣ ಮಟ್ಟ ಹೆಚ್ಚುತ್ತೆ , ಕನ್ನಡಿಗ  ಕನ್ನಡ ಸಿನಿಮಾ ಗೆಲಿಸಿಯೀ ಗೆಲ್ಲಿಸುತಾನೆ , ಹೊಸತನಕೆ  ಹೊಸ ಬೆಲೆ ಸಿಕ್ಕೆ ಸಿಗುತ್ತದೆ .

Sunday, 17 March 2013

ಸಿನಿಮಾವೊಂದು ಏನು ಮಾಡಬಲ್ಲದು ..?


           ಸಿನಿಮಾವೊಂದು ಏನು ಮಾಡಬಲ್ಲದು ..?

 
ನೂರಾರು   ಸಿನಿಮಾಗಳನ್ನು ನೋಡಿರುವ ನಾವುಗಳೇ ಅಂತರವಲೋಕನ  ಮಾಡಿಕೊಂಡಾಗ  ಇಂದು  ಜಾಗತಿಕ ಜನಪ್ರಿಯ  ಸಮೂಹ  ಮಾಧ್ಯಮ ವಾಗಿರುವ ಸಿನಿಮಾ  ನಮ್ಮ ಮೇಲೆ ಎಂತಹ ಪ್ರಭಾವ ಬೀ ರಿದೆ . ಅದರಿಂದ ಎಂತಹ  ಬದಲಾವನೆಯನ್ನು ನಿರೀಕ್ಸಿಸಿದ್ದೆವು ,,? ಇನ್ದೆನಾಗಿದೆ  ?  ಎಂದು  ವಿವೆಚಿಸಿದಾಗ ಅನೇಖ ವು  ಋಣಾತ್ಮಕ .ಕೆಲವೇ ಧನಾತ್ಮಕ  ಪರಿಣ್ಹಾಮಗಲಾಗಿರುವ ಉತ್ತರ ನಮಗೆ  ಸಿಗುತ್ತದೆ . ಏಕೆ  ಹೀಗಾಯಿತು ?
 
 ಮೊನ್ನೆ ಕಾಸರವಳ್ಳಿ ಯವರ   'ಕೂರ್ಮವತಾರ  'ಸಿನಿಮಾ  ನೋಡಿದಾಗ  ಅಲ್ಲಿ ಗಾಂದಿವಾದವೆ  ಇಂದಿನ  ಯುವಕರಿಗೆ  ಸವಕಲು ಬೋದನೆಯಾಗಿ ಕಾಣುತ್ತಿರುವ  ಬಗ್ಗೆ ಚಿತ್ರಿಸಲಾಗಿದೆ . , ಗಾಂದಿವಾದವಿರಲಿ , ಯಾವುದೇ ಒಳ್ಳೆತನವೋ ಇಂದು ಅಷ್ಟಾಗಿ ಬೇಕಾಗಿಲ್ಲವೆಂದು ಹೇಳಲಾಗಿದೆ .ಬದುಕಿಗೆ ದುಡ್ಡು ಬೇಕು ಅದಕೊಂದು ಮಾರ್ಗ ಬೇಕು  ಅಷ್ಟೇ . ಅಲ್ಲಿ ಮೌಲ್ಫ್ಯ , ನೀತಿ ,ನಿಯಮ ನಗಣ್ಯ ಎನ್ನುವ ಕಾಲ ತಲುಪಿರುವ ನಮ್ಮ ಮಾಹಿತಿ  ಜಗತ್ತಿನ ಮುಂದಿನ ದಿನಗಳನ್ನು ನೆನೆದರೆ  ಮತ್ತಷ್ಟು ಸಾಮೂಹಿಕ ಅತ್ಯಾಕಾರಿಗಳು , ಉಗ್ರರು , ಧರ್ಮಾನ್ದರು ಎಲ್ಲೆಡೆ ಹೆಚಾಗುವ ಲಕ್ಷಣಗಳೇ ಕಾಣಿಸುತ್ತಿವೆ .

                  ನೈತಿಕತೆಯನ್ನೇ ಹೊತ್ತು ಬೋದಿಸುವ ದರ್ಮಶಾಲೆಗಳ,   ಪುಸ್ತಕಗಳ ಶಿಕ್ಸಕರ , ಶಾಲೆಗಳ ಶ್ರಮ ಎಲ್ಲಿ ಸೊರಿಕೆಯಾಯಿತು  ?  ಕಲಾತ್ಮಕ , ವ್ಯಾಪಾರಿ  ಸಿನಿಮಾಗಳ  ಮುಕ  ಹೊತ್ತು ಬರುವ ಸಿನಿಮಾಗಳು ಏನೆಲ್ಲಾ ಬದಲಾವಣೆ  ತರಲು ಸಾಧ್ಯವಿತ್ತು  ಆದರೆ ಅದೇಕೆ ಸದ್ಯವಾಗುತ್ತಿಲ್ಲ , ಬದ್ದತೆಯ ಕೊರತೆಗೆ ಕಾರಣವೇನು  ?  ಜಗತ್ತೆ   ಅನೈತಿಕತೆ , ಅಂದಾಚಾರದ ಬಲೆಯಲ್ಲಿ  ಬಿದ್ದಿರಲು   ಮೇಲೆತ್ತುವವರಾರು ?  ಇದೇ ಬದುಕೆಂದು ಕೊಂಡು ,ಸುಮ್ಮನಾಗಬೇಕೆ  ?


        ಸಾಮಾಜಿಕ ಜವಾಬ್ದಾರಿ  ಅರಿತು ಮುನ್ನಡೆಯಬೀಕಾಗಿರುವ  ಮಾಧ್ಯಮ , ಸರ್ಕಾರದ ಕೆಲವು ನಿರ್ದಾರಗಳು ಜಾಗತಿಕ ಸಂಸ್ಕೃತಿಯ ಹೆಸರಲ್ಲಿ ಎದ್ದ  ಪಾಶ್ಚಿಮಾತ್ಯರ ಮಕ್ಕಿಕಾ ಮಕ್ಕಿ ಅನುಕರಣೆ  ಎಲ್ಲವು ದೊಡ್ಡ ಹೊಡೆತವನ್ನೇ ನೀಡಿವೆ ಎಂದರೆ  ತಪ್ಪಾಗಲಾರದು . ಸಮಾಜದ ಸುದಾರಣೆ ಹೆಸರಲ್ಲಿ ಬಂದ ನೂರಾರು
 ಚ ಳುವಲಿಗಳು , ಹೋರಾಟಗಾರರು , ಪುಸ್ತಕಗಳು ಇತಿಹಾಸ ಮಾತ್ರ , ಇಂದು ಹಗರಣಗಳ , ಸಮೂಹಿಕ ಅತ್ಯಾಚಾರಿಗಳ , ಉಗ್ರರು ವರ್ತಮಾನದಲ್ಲಿದ್ದು  ಅವರ ಕ್ರೋರಮುಖಗಳೇ ನಮ್ಮ ಮಕ್ಕಳಿಗೆ ಪ್ರೇರಣೆ , ಪ್ರಚೋದನೆಗೆ ಆಹಾರವಾಗಬಲ್ಲ ಅಪಾಯಕಾರಿ ಸನ್ನಿವೇಶ ದಲ್ಲಿದ್ದೇವೆ . ಹಿಗೆರಲು  ಈ ಸಿನಿಮಾ ಮಾಧ್ಯಮವು ಹಣ ಮಾಡುವ ದಂದೆಯವರ ಕೈಲಿ ಸಿಕ್ಕು ದಾರಿ ತಪ್ಪಿ ಎಲ್ಲರನ್ನು ಬ್ರಮಲೋಕದತ್ತ್ಮಾ  ಕರೆದುಯ್ದು ಕತ್ತಲೆ ಯಲ್ಲಿ ಎಲ್ಲವನ್ನು ತೋರಿಸಿ ಜಗತ್ತನೂ ಕತ್ತೆಲೆಗೆ ತಳ್ಳಲು ಬೇಕಾದ ವೇದಿಕೆಗೆ ಪೂರಕವಾಗುತ್ತಿರುವುದು ಶೋಚನೀಯ ....
            
  ಗೋಳದಲ್ಲಿ  ಮನುಜನ ಬಾಳು ,
 ಬರಿ    ಗೋ ಳು ..
 ಬೊದನೆ , ಸಿನಿಮಾ , ನೀತಿ , ಪುಸ್ತಕ ಎಲ್ಲ ,... ಓಳು ..
ಹೊಳಾಗುತ್ತಿದೆ.
              

Thursday, 7 March 2013

ಮನೆಯೆಂಬ ಪಾಟ ಶಾಲೆಯಲ್ಲಿ ಟಿವಿಎಂಬ ಮೂರ್ಖ ಶಿಕ್ಷಕ

ಮನೆಯೆಂಬ ಪಾಟ ಶಾಲೆಯಲ್ಲಿ ಟಿವಿ ಎಂಬ                         ಮೂರ್ಖ  ಶಿಕ್ಷಕ .,,

ಶಾಲೆಯಲ್ಲಿ  ವರ್ಷಗಟ್ಟಲೆ ಪಾಟಮಾಡಿ ಶಿಕ್ಷಕರು ಕಲಿಸಿದ ನೀತಿ ,ಮೌಲ್ಯಗಳನ್ನು  ನಿಮಿಷಮಾತ್ರದಲ್ಲಿ    ಮುರಿಯುವಂತೆ  ಪ್ರಚೋದಿಸುವ ಟಿವಿಲೋಕದ  ದಾರಾವಾಹಿಗಳು , ಸಿನಿಮಾಗಳು ,ಮಕ್ಕಳು , ಮನೆಮಂದಿಯನ್ನು ಕ್ಷಣದಲಿ  ಸಾಮುಹಿಕವಾಗಿ ತನ್ನ ಆಪೋಶನಕ್ಕೆ  ತೆಗೆದುಕೂಲ್ಲಬಲ್ಲ  ಮಾಯಾವಿ  ಎನ್ನಬಹುದು .ಸೆನ್ಸಾರ್ ಇಲ್ಲದೇ  , ಸಾಮಾಜಿಕ  ಬದತೆಯೂ ಇಲ್ಲದೆ ,ದುದ್ದುಮಾಡುವ , ತಮ್ಮ ಟಿ ಅರ ಪಿ ಏರಿಸಿಕೂಲ್ಲ್ಳುವ ಭರದಲ್ಲಿ   ವಿಚಿತ್ರ , ಅನೈತಿಕ  ದೃಶ್ಯ ಹೊತ್ತ , ಆಶ್ಲೀಲ, ಬಲಾತ್ಕಾರದ ಹಸಿ ಹಸಿ ದೃಶ್ಯ ತೋರಿಸಿ ,ಮತ್ತಸ್ತು ಜನರನ್ನು ಕೆರಳಿಸುವಲ್ಲಿ ಕಾರಣ ವಾಗುತ್ತಿರುವುದು ಶೋಚನಿಯವೇ ಸರಿ . 


ಟಿವಿ , ಇಂಟರ್ನೆಟ್ ಣ ವ್ಯಾಮೋಹಕ್ಕೆ ಸಿಕ್ಕ  ಮಕ್ಕಳು  ಇಂದು ಹೆಚ್ಚು ಅನೈತಿಕ ಕಾರ್ಯ , ಕಾನೂನು ಉಲ್ಲಂಗನೆ , ಸಾಮಾಜಿಕ ನಿಯಮ ಉಲ್ಲಂಗನೆ , ಸಾಂಸ್ಕೃತಿಕ  ಅಧಪತನ ತಲುಪಿರುವುದು ಸ್ಪಷ್ಟ ." ಕುಂಬಾರನಿಗೆ ವರುಷ ದೊಣ್ಣೆಗೆ  ನಿಮಿಷ' ಎನ್ನುವಂತೆ  ಶಿಕ್ಷಕರು ಶ್ಹಾಲೆಯಲ್ಲಿ ಪತ್ಯ ಪುಸ್ತಕದ ದಾರ್ಮಿಕ ,ನೈತಿಕ , ಸಾಂಸ್ಕೃತಿಕ  ,ರಾಷ್ಟ್ರೀಯ ಮೌಲ್ಯಗಳನ್ನು  ಕಲಿಸಿದ್ದನ್ನು  ಮನೆಯಲಿ ಟಿವಿ ನಿಮಿಷದಲ್ಲಿ ಹಾಳುಮಾಡುತ್ತಿದೆ . ಶೋಚನಿಯ .

 ಕೆಲವು ದಾರವಹಿಗಳಿವೆ  ಅವು ಸದಾ ಅತ್ತೆ ಸೊಸೆ ಜಗಳ , ಅಣ್ಣ ತಮ್ಮಂದಿರು ಆಸ್ತಿಗಾಗಿ ಮಾಡುವ ಕುಟಿಲೂಪಾಯಗಳುನ್ನು , ಶಾಲೆಯಲ್ಲಿನ್ , ಕಾಲೇಜಿನಲ್ಲಿನ  ಮಕ್ಕಳ  ಅಪಹಾಸ್ಯಗಲ್ನ್ನೇ ಕಲ್ಪಿಸಿ ಕಲಿಪಿಸಿ  ವಿಜ್ರಮ್ಬಿಸಿ  ತೋರಿಸುತ್ತವೆ . ದೊಡ್ಡದಾಗಿ ಜೂಮ್ ಮಾಡಿ ಮಾಡಿ  ಯುವ ಮಹಿಳೆಯರ ಅರೆಬೆತ್ತಲೆ ದೇಹವನ್ನು , ಅತ್ಯಚರವನೂ ಹಸಿ ಹಸಿ ತೂರಿಸಿ  ನೋಡುತ್ತಿರುವವರ ಅಸೆ ,ಕಾಮ ಮತ್ತಷ್ಟು ಕೆರಳುವಂತೆ ಮಾಡುತ್ತವೆ ,ಅತ್ಯಾಚಾರಗಳ ಹಸಿ ದೃಶ್ಯಗಳನ್ನೇ ಪೋಣಿಸಿ ಪೋಣಿಸಿ ತೋರಿಸುತ್ತವೆ , ಇವೆಲ್ಲ ಬೇಕಾ ...?







ಸಮಾಜದ ,ಕುಟುಂಬದ ಸ್ವಾಸ್ತ ತೆಗೆ , ಸಹಬಾಳ್ವೆಗೆ ಕಾರಣವಾಗಬೇಕಿದ್ದ್  ಟಿವಿ , ಇಂಟರ್ನೆಟ್ ,ಸಮಾಜದಲ್ಲಿ ಅನೈತಿಕತೆಗೆ , ಕುಟುಂಬದ ಮನ ಕಲಕುವಿಕೆಗೆ ಕಾರಣವಾಗುತ್ತಿರುವುದರ ವಿರುದ್ದ ಒಂದು ಗಟ್ಟಿ ರಣ ಕಹಳೆ ಓದಬೇಕಿದೆ ಅಲ್ಲವೇ ..?