Sunday, 9 March 2014

ಉಗ್ರ ಸ್ವರೂಪಿ ಕರ್ಮವೀರ ....

ಓಡುವ 'ಉಗ್ರ'ನೊಂದಿಗೆ ಓಡಿದರೆ  ಹೊಸತನದ  ಅನಾವಣ ಮಾಡಿಸುವ  "ಉಗ್ರಂ    "ಟ್ರೈಲರ್ ನಲ್ಲೇ ಕಾಡಿದ  ಉಗ್ರ  ಟಾಕೀಸಿನಲ್ಲು  ಕಾಡುತ್ತಾನೆ . ಬೆಚ್ಚಿ ಬೀಳಿಸುತ್ತಾನೆ .ನಮ್ಮೆದೆಯಲ್ಲಿ  ಉಗ್ರ ಸ್ವರೂಪಿಯಾಗಿ ಕುಂತುಬಿಡುತಾನೆ. ಕ್ರೌರ್ಯವನ್ನು ಇಷ್ಟ ಪಡುವವರಿಗೆ  ಪ್ರೆರಕನಾಗುತ್ತಾನೆ. ಇಡೀ ಟಾಕೀಸು ಕ್ರೌರ್ಯದಲೆಯಲ್ಲಿ  ಮಿನ್ದೆಳುತ್ತದೆ .ಆಗೀಗ  ಕೊಂಚಾ ಮನಸು ಹಗುರಾಗಲು ಕೇಳಿಸಿಕೊಳ್ಳಬಹುದಾದ  ಹಾಡುಗಳಲಿ  ನಾಯಕ ನಾಯಕಿ ಮುದ್ದಾಗಿ  ಲವಲವಿಕೆ ಮೂಡಿಸಿ ಸುಮ್ಮನಾಗುತಾರೆ .ಕ್ಯಾಮರಾ  ಪ್ರೇಕ್ಷಕನನ್ನು  ಕ್ರೌರ್ಯಮಾಯೆ ಯಾ  ಲೋಕಕ್ಕೆ  ಯಶಸ್ವಿಯಾಗಿ ಕರೆದೊಯ್ಯುತ್ತದೆ. ನಾಯಕ ಹೆಚ್ಚು ಮಾತಾಡದೆ  ಮಾಡಿ ತೋರಿಸುವ ಉಗ್ರ ಸ್ವರೂಪಿ  ಕರ್ಮವೀರ  ,ಹೊಸತನದೊಂದಿಗೆ  ಮನರಂಜಿಸುತ್ತಾನೆ. ಒಮ್ಮೆ ನೋಡಲೇಬೇಕಾದ  ಸಾಕಷ್ಟು  ಹೊಸತನ ಕ್ಕೆ ನಟ ಮುರುಳಿ  ,ನಿರ್ದೇಶಕ ಪ್ರಶಾಂತ್ ನೀಲ್ ಅವರು ಮತ್ತು ಅವರ  ತಂಡ  ಪ್ರಯತ್ನಿಸಿದೆ . ಅವರಿಂದ  ಮುಂದೆ  ಮತ್ತಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು .ನೀವೂ ಒಮ್ಮೆ ನೋಡಿ ಕಮೆಂಟ್  ಮಾಡಿ .( ನೋಡದೆ  ಸುಮ್ನೆ ಏನೂ ಹೇಳಬೇಡಿ  ...).



Monday, 9 September 2013

ಕನ್ನಡಿಗರೇಕೆ ಅನ್ಯ ಭಾಷಾ ಸಿನಿಮಾಗಳತ್ತ ವಾಲುತ್ತಿದ್ದಾರೆ ,,?

             ಕನ್ನಡಿಗರೇಕೆ  ಅನ್ಯ ಭಾಷಾ  ಸಿನಿಮಾಗಳತ್ತ  ವಾಲುತ್ತಿದ್ದಾರೆ ,,?

ಎಲ್ಲಿಂದಲೋ  ಎರವಲು ತಂದ ಕತೆಗಳನು  ಸಿನಿಮಾ ಮಾಡುತ್ತಿದ್ದಾರೆ  ಎಂದು ರೋಸಿ ಹೋಗಿದ್ದಾರೆಯೇ....?

ಎಲ್ಲಿಂದಲೋ ತಂದ ಕತೆಗಳನು ಸಿನಿಮಾ ಮಾಡುತ್ತಿದ್ದಾರೆ ಯಾಕೆ ?  ಕನ್ನಡ ಚಿತ್ರ ಬರಹಗಾರರನ್ನು  ಕಡೆಗಣಿಸಿ  ಪರ ಚಿತ್ರ ಗಳನ್ನು ಪಾಪಿಮಾಡಿ  ನಮ್ಮವರೇ  ಚಿತ್ರ ರಂಗ ದಳಿವಿಗೆ  ಕಾರಣವಾಗುತ್ತಿದಾರೆ ಎನಿಸುತ್ತಿದೆ . ನಿಮಗೆ ,,,? ಕಾಮೆಂಟ್  ಮಾಡಿ ಗೆಳೆಯರೇ ,, ನಮ್ಮ ಬ್ಲಾಗ್  ಸೇರಿಕೊಳ್ಳಿ ....ಬೆಂಬಲಿಸಿ ....


ಕನ್ನಡಿಗರೇಕೆ  ಅನ್ಯ ಭಾಷಾ  ಸಿನಿಮಾಗಳತ್ತ  ವಾಲುತ್ತಿದ್ದಾರೆ ,,? 

                               ಇತ್ತೀಚಿನ  ಕನ್ನಡ ಸಿನಿಮಾಗಳ ಹೆಸರುಗಳ ನ್ನೇ  ಗಮನಿಸಿ ,  ಬಚ್ಚನ್ , ವಿಷ್ಣುವರ್ಧನ , ರಜನೀಕಾಂತ , ಅಂಬರೀಶ , ಇನ್ನೂ ಎನೀನೋ  ಹೆಸರುಗಳು ಹಟಮಾಡಿ  ರಿಜಿಸ್ಟ್ರಾರ್  ಆಗುತ್ತಿವೆ . ಗಾಸಿಪ್  ಎಬ್ಬಿಸುತ್ತಿವೆ , ಆಕ್ರೋಶಕ್ಕೆ ಗುರಿಯಾಗುತ್ತಿವೆ .ಹೆಸರನ್ನು ಇಡುವುದಕ್ಕೆ  ಕರ್ಚುಮಾಡುವ  ಬುದ್ದಿಯನ್ನು  ಚಿತ್ರಕಥೆ , ಊತ್ತಮ  ನಿರೂಪಣೆ , ನಿರ್ದೇಶನ, ತಾಂತ್ರಿಕತೆ  ಹೊಸತನಕ್ಕೆ  ಶ್ರಮಿಸಿದ್ದರೆ  ಕನ್ನಡ  ಚಿತ್ರರಂಗ  ಹಿಂದಿನಂತೆ  ಕಂಗೊಳಿಸುತ್ತಿತ್ತು .  ಸಿನಿಮಾ ಶೀರ್ಷಿಕೆ ಇಡುವಲ್ಲಿಯೂ  ಒದ್ದಾಡುತ್ತಿದ್ದಾರೆ. ಅಯ್ಕೆಯಲಿ ದ್ವಂದ್ವೆಕ್ಕೆ  ಬೀಳುತಿದ್ದಾರೆ ಯಾಕೆ ?  ಇಲ್ಲಿ ಚಿತ್ರ ಬರಹಗಾರರಿಗೆ  ಹೆಚ್ಚಿನ ಪ್ರಾಶಸ್ತ್ಯ  ನಿಡುವವರೆಗೂ  ಇದು ಹೀಗೇ ಮುಂದುವರಿಯುತ್ತದೆ.  ನಾಯಕ ನಟರ ೩೦ ,೪೦ ದಿನದ ಕಾಲಸಿಟ್ಗೆ  ಕೋಟಿ ಸುರಿಯೂ ನಿರ್ಮಾಪಕರು  ಚಿತ್ರ ಬರಹಗಾರರಿಗೆ  , ತಾಂತ್ರಿಕ ವರ್ಗದವರಿಗೆ  ಸಾವಿರಗಳ ಲೆಕ್ಕ ದಾಟದಂತೆ ಎಚ್ಚರ ವಹಿಸುತ್ತಾನೆ .ಕಾಡಿಸುತಾನೆ ,, ಇದೇ ಇಲ್ಲೇ  ಚಿತ್ರರಂಗ  ದಾರಿ ತಪ್ಪುತ್ತಿರುವುದು .ಇದು ಕನ್ನಡ  ಸಿನಿಮಾಗಳ  ಗುಣಮಟ್ಟದ  ಮೇಲೆ  ವ್ಯತಿರಿಕ್ತ  ಪರಿಣಾಮ  ಬೀರುತ್ತಿದೆ .
 ನಮ್ಮ ನಾಯಕ  ನಟರುಗಳೇ  ಪರಭಾಷಾ ಸಿನಿಮಾಗಳತ್ತ  ವಾಲುತ್ತಿದ್ದಾರೆ , ಎಲ್ಲಿಂದಲೋ ತಂದ ಕತೆಗಳನು  ತಂದು ಸಿನಿಮಾ ಮಾಡುತ್ತಿದ್ದಾರೆ , ನಮ್ಮೆ  ಲೇಖಕರನ್ನು , ಸಿನಿಮಾ  ಬರಹಗಾರರನ್ನು ಸರಿಯಾಗಿ ದುಡಿಸಿಕೊಳ್ಳದೆ  ಎರವಲು ತಂದ ಕತೆ ಗಳನ್ನೂ ಕಡಿಮೆ ಅವದಿಯಲ್ಲಿ ರೀಲು ಸುತ್ತಿ  ತಮ್ಮ  ಸ್ಥಾನ  ಗಟ್ಟಿ ಮಾಡಿಕೊಳ್ಳುತಿದರಷ್ಟೇ,,! ಹಾಗಾಗಿ  ನಮ್ಮ ಚಿತ್ರ ರಸಿಕರು  ರೋಸಿ ಹೋಗಿ  ನೇರವಾಗಿ ಪರಭಾಷಾ ಸಿನಿಮಾಗಳನ್ನೇ  ನೋಡಿ  ಬರುತಿದಾರೆ , ಹಾಗಾಗಿ ಎರವಲು ತಂದ  ಕನ್ನಡ ಸಿನಿಮಾಗಳು  ಸಾಲು ಗಟ್ಟಲೆ  ಸೋಲುತ್ತಿವೆ . ಸದ್ಯ  ಅಪ್ಪು  ಸಿನಿಮಾಗಳು  ಉತ್ತಮ , ದರ್ಶನ್  ಸಿನಿಮಾಗಳು  ಪರವಾಗಿಲ್ಲ. ಶಿವಣ್ಣ ಆಯ್ಕೆ ಎಲ್ಲೋ  ಮಿಸ್ ಹೊಡಿತಾ ಇದೆ , ಹೊಸಬರು  ಯಾಕೋ ಮ್ಯಾಜಿಕ್ ಮಾಡಿ  ಲಾಜಿಕ್ ಇಲ್ಲದೆ ಕಾಣಿಯಾಗುತ್ತಿದ್ದಾರೆ. ಬಟ್, ಸೂರಿ ,  ಜನರ ಅಭಿರುಚಿ  ಬದಲಿಸಿ ಬಿಟ್ಟಿದಾರೆ , ಆದರೆ ಬದ್ದತೆಯ  ಕೊರತೆ ಕಾಣುತ್ತಿದೆ . ರವಿಚಂದ್ರನ್  ಯಾಕೋ ಏಕಾಂಗಿ ಯಾಗೆ  ಉಳಿಯುತ್ತಿದಾರೆ . ಪ್ರೇಮ ಲೋಕಕೆ ಎಂದು ಬರುತಾರೋ ಕಾಡು ನೋಡಬೇಕಿದೆ .

                           ಒಟ್ಟಿನಲ್ಲಿ ಚಿತ್ರ ಬರಹಗಾರಿಗೆ , ತಾಂತ್ರಿಕ ವರ್ಗಕ್ಕೆ ಉತ್ತಮ ವೇದಿಕೆ ರೂಪಿಸುವವರೆಗೂ  ಕನ್ನಡ ಚಿತ್ರರಂಗ ಎರವಲು ಸಿನಿಮಾಗಳನ್ನೇ ನೆಚ್ಚಿಕೊಂಡು  ಅಲೆದಾಡುತ್ತಾಲ್ಲೇ ಇರಬೇಕಾಗುತ್ತದೆ . ಮೊದಲು  ಚಿತ್ರಕತೆ , ಕತೆಗೆ ಪ್ರಾಶಸ್ತ್ಯ , ನಂತರ ನಟರಿಗೆ ಎನ್ನುವ ಮಂತ್ರ ಪಾಲಿಸಲಿ  , ಚಿತ್ರ ರಂಗ ತಂತಾನೇ ಬೆಳೆಯುತ್ತೆ , ಗುಣ ಮಟ್ಟ ಹೆಚ್ಚುತ್ತೆ , ಕನ್ನಡಿಗ  ಕನ್ನಡ ಸಿನಿಮಾ ಗೆಲಿಸಿಯೀ ಗೆಲ್ಲಿಸುತಾನೆ , ಹೊಸತನಕೆ  ಹೊಸ ಬೆಲೆ ಸಿಕ್ಕೆ ಸಿಗುತ್ತದೆ .

Sunday, 17 March 2013

ಸಿನಿಮಾವೊಂದು ಏನು ಮಾಡಬಲ್ಲದು ..?


           ಸಿನಿಮಾವೊಂದು ಏನು ಮಾಡಬಲ್ಲದು ..?

 
ನೂರಾರು   ಸಿನಿಮಾಗಳನ್ನು ನೋಡಿರುವ ನಾವುಗಳೇ ಅಂತರವಲೋಕನ  ಮಾಡಿಕೊಂಡಾಗ  ಇಂದು  ಜಾಗತಿಕ ಜನಪ್ರಿಯ  ಸಮೂಹ  ಮಾಧ್ಯಮ ವಾಗಿರುವ ಸಿನಿಮಾ  ನಮ್ಮ ಮೇಲೆ ಎಂತಹ ಪ್ರಭಾವ ಬೀ ರಿದೆ . ಅದರಿಂದ ಎಂತಹ  ಬದಲಾವನೆಯನ್ನು ನಿರೀಕ್ಸಿಸಿದ್ದೆವು ,,? ಇನ್ದೆನಾಗಿದೆ  ?  ಎಂದು  ವಿವೆಚಿಸಿದಾಗ ಅನೇಖ ವು  ಋಣಾತ್ಮಕ .ಕೆಲವೇ ಧನಾತ್ಮಕ  ಪರಿಣ್ಹಾಮಗಲಾಗಿರುವ ಉತ್ತರ ನಮಗೆ  ಸಿಗುತ್ತದೆ . ಏಕೆ  ಹೀಗಾಯಿತು ?
 
 ಮೊನ್ನೆ ಕಾಸರವಳ್ಳಿ ಯವರ   'ಕೂರ್ಮವತಾರ  'ಸಿನಿಮಾ  ನೋಡಿದಾಗ  ಅಲ್ಲಿ ಗಾಂದಿವಾದವೆ  ಇಂದಿನ  ಯುವಕರಿಗೆ  ಸವಕಲು ಬೋದನೆಯಾಗಿ ಕಾಣುತ್ತಿರುವ  ಬಗ್ಗೆ ಚಿತ್ರಿಸಲಾಗಿದೆ . , ಗಾಂದಿವಾದವಿರಲಿ , ಯಾವುದೇ ಒಳ್ಳೆತನವೋ ಇಂದು ಅಷ್ಟಾಗಿ ಬೇಕಾಗಿಲ್ಲವೆಂದು ಹೇಳಲಾಗಿದೆ .ಬದುಕಿಗೆ ದುಡ್ಡು ಬೇಕು ಅದಕೊಂದು ಮಾರ್ಗ ಬೇಕು  ಅಷ್ಟೇ . ಅಲ್ಲಿ ಮೌಲ್ಫ್ಯ , ನೀತಿ ,ನಿಯಮ ನಗಣ್ಯ ಎನ್ನುವ ಕಾಲ ತಲುಪಿರುವ ನಮ್ಮ ಮಾಹಿತಿ  ಜಗತ್ತಿನ ಮುಂದಿನ ದಿನಗಳನ್ನು ನೆನೆದರೆ  ಮತ್ತಷ್ಟು ಸಾಮೂಹಿಕ ಅತ್ಯಾಕಾರಿಗಳು , ಉಗ್ರರು , ಧರ್ಮಾನ್ದರು ಎಲ್ಲೆಡೆ ಹೆಚಾಗುವ ಲಕ್ಷಣಗಳೇ ಕಾಣಿಸುತ್ತಿವೆ .

                  ನೈತಿಕತೆಯನ್ನೇ ಹೊತ್ತು ಬೋದಿಸುವ ದರ್ಮಶಾಲೆಗಳ,   ಪುಸ್ತಕಗಳ ಶಿಕ್ಸಕರ , ಶಾಲೆಗಳ ಶ್ರಮ ಎಲ್ಲಿ ಸೊರಿಕೆಯಾಯಿತು  ?  ಕಲಾತ್ಮಕ , ವ್ಯಾಪಾರಿ  ಸಿನಿಮಾಗಳ  ಮುಕ  ಹೊತ್ತು ಬರುವ ಸಿನಿಮಾಗಳು ಏನೆಲ್ಲಾ ಬದಲಾವಣೆ  ತರಲು ಸಾಧ್ಯವಿತ್ತು  ಆದರೆ ಅದೇಕೆ ಸದ್ಯವಾಗುತ್ತಿಲ್ಲ , ಬದ್ದತೆಯ ಕೊರತೆಗೆ ಕಾರಣವೇನು  ?  ಜಗತ್ತೆ   ಅನೈತಿಕತೆ , ಅಂದಾಚಾರದ ಬಲೆಯಲ್ಲಿ  ಬಿದ್ದಿರಲು   ಮೇಲೆತ್ತುವವರಾರು ?  ಇದೇ ಬದುಕೆಂದು ಕೊಂಡು ,ಸುಮ್ಮನಾಗಬೇಕೆ  ?


        ಸಾಮಾಜಿಕ ಜವಾಬ್ದಾರಿ  ಅರಿತು ಮುನ್ನಡೆಯಬೀಕಾಗಿರುವ  ಮಾಧ್ಯಮ , ಸರ್ಕಾರದ ಕೆಲವು ನಿರ್ದಾರಗಳು ಜಾಗತಿಕ ಸಂಸ್ಕೃತಿಯ ಹೆಸರಲ್ಲಿ ಎದ್ದ  ಪಾಶ್ಚಿಮಾತ್ಯರ ಮಕ್ಕಿಕಾ ಮಕ್ಕಿ ಅನುಕರಣೆ  ಎಲ್ಲವು ದೊಡ್ಡ ಹೊಡೆತವನ್ನೇ ನೀಡಿವೆ ಎಂದರೆ  ತಪ್ಪಾಗಲಾರದು . ಸಮಾಜದ ಸುದಾರಣೆ ಹೆಸರಲ್ಲಿ ಬಂದ ನೂರಾರು
 ಚ ಳುವಲಿಗಳು , ಹೋರಾಟಗಾರರು , ಪುಸ್ತಕಗಳು ಇತಿಹಾಸ ಮಾತ್ರ , ಇಂದು ಹಗರಣಗಳ , ಸಮೂಹಿಕ ಅತ್ಯಾಚಾರಿಗಳ , ಉಗ್ರರು ವರ್ತಮಾನದಲ್ಲಿದ್ದು  ಅವರ ಕ್ರೋರಮುಖಗಳೇ ನಮ್ಮ ಮಕ್ಕಳಿಗೆ ಪ್ರೇರಣೆ , ಪ್ರಚೋದನೆಗೆ ಆಹಾರವಾಗಬಲ್ಲ ಅಪಾಯಕಾರಿ ಸನ್ನಿವೇಶ ದಲ್ಲಿದ್ದೇವೆ . ಹಿಗೆರಲು  ಈ ಸಿನಿಮಾ ಮಾಧ್ಯಮವು ಹಣ ಮಾಡುವ ದಂದೆಯವರ ಕೈಲಿ ಸಿಕ್ಕು ದಾರಿ ತಪ್ಪಿ ಎಲ್ಲರನ್ನು ಬ್ರಮಲೋಕದತ್ತ್ಮಾ  ಕರೆದುಯ್ದು ಕತ್ತಲೆ ಯಲ್ಲಿ ಎಲ್ಲವನ್ನು ತೋರಿಸಿ ಜಗತ್ತನೂ ಕತ್ತೆಲೆಗೆ ತಳ್ಳಲು ಬೇಕಾದ ವೇದಿಕೆಗೆ ಪೂರಕವಾಗುತ್ತಿರುವುದು ಶೋಚನೀಯ ....
            
  ಗೋಳದಲ್ಲಿ  ಮನುಜನ ಬಾಳು ,
 ಬರಿ    ಗೋ ಳು ..
 ಬೊದನೆ , ಸಿನಿಮಾ , ನೀತಿ , ಪುಸ್ತಕ ಎಲ್ಲ ,... ಓಳು ..
ಹೊಳಾಗುತ್ತಿದೆ.
              

Thursday, 7 March 2013

ಮನೆಯೆಂಬ ಪಾಟ ಶಾಲೆಯಲ್ಲಿ ಟಿವಿಎಂಬ ಮೂರ್ಖ ಶಿಕ್ಷಕ

ಮನೆಯೆಂಬ ಪಾಟ ಶಾಲೆಯಲ್ಲಿ ಟಿವಿ ಎಂಬ                         ಮೂರ್ಖ  ಶಿಕ್ಷಕ .,,

ಶಾಲೆಯಲ್ಲಿ  ವರ್ಷಗಟ್ಟಲೆ ಪಾಟಮಾಡಿ ಶಿಕ್ಷಕರು ಕಲಿಸಿದ ನೀತಿ ,ಮೌಲ್ಯಗಳನ್ನು  ನಿಮಿಷಮಾತ್ರದಲ್ಲಿ    ಮುರಿಯುವಂತೆ  ಪ್ರಚೋದಿಸುವ ಟಿವಿಲೋಕದ  ದಾರಾವಾಹಿಗಳು , ಸಿನಿಮಾಗಳು ,ಮಕ್ಕಳು , ಮನೆಮಂದಿಯನ್ನು ಕ್ಷಣದಲಿ  ಸಾಮುಹಿಕವಾಗಿ ತನ್ನ ಆಪೋಶನಕ್ಕೆ  ತೆಗೆದುಕೂಲ್ಲಬಲ್ಲ  ಮಾಯಾವಿ  ಎನ್ನಬಹುದು .ಸೆನ್ಸಾರ್ ಇಲ್ಲದೇ  , ಸಾಮಾಜಿಕ  ಬದತೆಯೂ ಇಲ್ಲದೆ ,ದುದ್ದುಮಾಡುವ , ತಮ್ಮ ಟಿ ಅರ ಪಿ ಏರಿಸಿಕೂಲ್ಲ್ಳುವ ಭರದಲ್ಲಿ   ವಿಚಿತ್ರ , ಅನೈತಿಕ  ದೃಶ್ಯ ಹೊತ್ತ , ಆಶ್ಲೀಲ, ಬಲಾತ್ಕಾರದ ಹಸಿ ಹಸಿ ದೃಶ್ಯ ತೋರಿಸಿ ,ಮತ್ತಸ್ತು ಜನರನ್ನು ಕೆರಳಿಸುವಲ್ಲಿ ಕಾರಣ ವಾಗುತ್ತಿರುವುದು ಶೋಚನಿಯವೇ ಸರಿ . 


ಟಿವಿ , ಇಂಟರ್ನೆಟ್ ಣ ವ್ಯಾಮೋಹಕ್ಕೆ ಸಿಕ್ಕ  ಮಕ್ಕಳು  ಇಂದು ಹೆಚ್ಚು ಅನೈತಿಕ ಕಾರ್ಯ , ಕಾನೂನು ಉಲ್ಲಂಗನೆ , ಸಾಮಾಜಿಕ ನಿಯಮ ಉಲ್ಲಂಗನೆ , ಸಾಂಸ್ಕೃತಿಕ  ಅಧಪತನ ತಲುಪಿರುವುದು ಸ್ಪಷ್ಟ ." ಕುಂಬಾರನಿಗೆ ವರುಷ ದೊಣ್ಣೆಗೆ  ನಿಮಿಷ' ಎನ್ನುವಂತೆ  ಶಿಕ್ಷಕರು ಶ್ಹಾಲೆಯಲ್ಲಿ ಪತ್ಯ ಪುಸ್ತಕದ ದಾರ್ಮಿಕ ,ನೈತಿಕ , ಸಾಂಸ್ಕೃತಿಕ  ,ರಾಷ್ಟ್ರೀಯ ಮೌಲ್ಯಗಳನ್ನು  ಕಲಿಸಿದ್ದನ್ನು  ಮನೆಯಲಿ ಟಿವಿ ನಿಮಿಷದಲ್ಲಿ ಹಾಳುಮಾಡುತ್ತಿದೆ . ಶೋಚನಿಯ .

 ಕೆಲವು ದಾರವಹಿಗಳಿವೆ  ಅವು ಸದಾ ಅತ್ತೆ ಸೊಸೆ ಜಗಳ , ಅಣ್ಣ ತಮ್ಮಂದಿರು ಆಸ್ತಿಗಾಗಿ ಮಾಡುವ ಕುಟಿಲೂಪಾಯಗಳುನ್ನು , ಶಾಲೆಯಲ್ಲಿನ್ , ಕಾಲೇಜಿನಲ್ಲಿನ  ಮಕ್ಕಳ  ಅಪಹಾಸ್ಯಗಲ್ನ್ನೇ ಕಲ್ಪಿಸಿ ಕಲಿಪಿಸಿ  ವಿಜ್ರಮ್ಬಿಸಿ  ತೋರಿಸುತ್ತವೆ . ದೊಡ್ಡದಾಗಿ ಜೂಮ್ ಮಾಡಿ ಮಾಡಿ  ಯುವ ಮಹಿಳೆಯರ ಅರೆಬೆತ್ತಲೆ ದೇಹವನ್ನು , ಅತ್ಯಚರವನೂ ಹಸಿ ಹಸಿ ತೂರಿಸಿ  ನೋಡುತ್ತಿರುವವರ ಅಸೆ ,ಕಾಮ ಮತ್ತಷ್ಟು ಕೆರಳುವಂತೆ ಮಾಡುತ್ತವೆ ,ಅತ್ಯಾಚಾರಗಳ ಹಸಿ ದೃಶ್ಯಗಳನ್ನೇ ಪೋಣಿಸಿ ಪೋಣಿಸಿ ತೋರಿಸುತ್ತವೆ , ಇವೆಲ್ಲ ಬೇಕಾ ...?







ಸಮಾಜದ ,ಕುಟುಂಬದ ಸ್ವಾಸ್ತ ತೆಗೆ , ಸಹಬಾಳ್ವೆಗೆ ಕಾರಣವಾಗಬೇಕಿದ್ದ್  ಟಿವಿ , ಇಂಟರ್ನೆಟ್ ,ಸಮಾಜದಲ್ಲಿ ಅನೈತಿಕತೆಗೆ , ಕುಟುಂಬದ ಮನ ಕಲಕುವಿಕೆಗೆ ಕಾರಣವಾಗುತ್ತಿರುವುದರ ವಿರುದ್ದ ಒಂದು ಗಟ್ಟಿ ರಣ ಕಹಳೆ ಓದಬೇಕಿದೆ ಅಲ್ಲವೇ ..?










Saturday, 1 December 2012

ಡಬ್ಬಿಂಗ್ ಡಬ್ಬ ಹಿಡಿಯಲು ಕನ್ನಡಿಗರ ಸೃಜನಶೀಲತೆಯೇನು ಸತ್ತಿದೆಯೇ ..?


                                 "   ಸಿನೆಮಾ ಏನು ಮಾಡಬಲ್ಲದು  ಎಂಬುದರ  ಸ್ಪಷ್ಠ ಅರಿವು ಇರುವವರು , ಕನ್ನಡಿಗರ  ಸೃಜನಶೀಲತೆಯ ಬೆಳವಣಿಗೆ , ಕಲಾವಿದರ ಹೊಟ್ಟೆಪಾಡು ,ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಕಳಕಳಿ ಇರುವ ಸ್ವಬಿಮಾನಿ ಕನ್ನಡಿಗರು ನೀವಾದರೆ ಖಂಡಿತ ಡಬ್ಬಿಂಗ ಪರ ಮಾತಾದುವುದಿಲ್ಲ ".

                              ಎಲ್ಲ ಭಾಷೆಯ ಸಿನಿಮಾಗಳ್ಳನ್ನು ಬೆಂಬಲಿಸೋಣ ,ನಮ್ಮ ಬಾಷೆಯನ್ನು ಬೆಳೆಸೋಣ , ನಮಗೆ ನಮ್ಮದೇ ಮಾರುಕಟ್ಟೆ , ನಮ್ಮ ಕಲಾವಿದರಿಗೆ , ನಮ್ಮವರ ಸೃಜನಶೀಲತೆಗೆ ನಮ್ಮದೇ ಮಾರುಕಟ್ಟೆ ಬೆಳೆಸೋಣ , ನಮ್ಮವರು ತಪ್ಪು ಮಾಡಿದರೆ ಕಳಪೆ ಸಿನಿಮಾ ಮಾಡಿದರೆ ತಿದ್ದೂಣ, ಆದರೆ ಯಾವುದೂ ಬಾಷೆಯ ಜನರ ಸಿನಿಮಾವನ್ನು ನೀರವಾಗಿ ದಬ್ಬಿನ್ಗ್ಫ್ ಮಾಡಿ ನಮ್ಮವರ ಹಕ್ಕನ್ನು ಕಸಿದು ಕಾಲಿ ಕುಉರಿಸುವುದು ಸಲ್ಲದು.

        ನಮ್ಮ ಹಣ , ನಮ್ಮ ಮನರಂಜನೆಯ  ಬಯಕೆ , ನಮ್ಮ ಆಯ್ಕೆ ಎಂದು ಸ್ವಾರ್ಥಿಗಳಾಗಿ ಯೋಚಿಸಿ ನಮ್ಮವರ ಸೃಜನಶೀಲತೆಗೆ  ವೇ ದಿಕೆಯಿಲ್ಲದಂತೆ ಮಾಡಿದರೆ ಮುಂದೆ ನಮ್ಮ ಸ್ವನ್ತಿಕೆಯೇ ನಾಶವಾಗಿ ಬಿಡುತ್ತದೆ . 


       ನಮ್ಮತನವಿಲ್ಲದ್ದು  ಮರಳುಗಾಡಿನ ಬದುಕಾಗಿ ಬಿಡುತ್ತದೆ , ನಮ್ಮವರೊಂದಿಗಿಲ್ಲದ  ವಿದೇಶಿ ಬದುಕಿನ  ಒಂಟಿ ಶೂನ್ಯತೆ ಕಾಡುತ್ತದೆ . ಬಾವನೆ ಬೆತ್ತಲಾದನ್ತೆನಿಸುತ್ತ್ದೆ . ಈಗಾಗಲೇ  ಜಾಗತಿಕ ಭಾಷೆಗಳಿಂದ  ತತ್ತರಿಸುತ್ತಿರುವ  ನಮ್ಮ ಕನ್ನಡವಾಗಲಿ , ನಮ್ಮ ದೇಶದ ಯಾವುದೀ ಪ್ರಾದೇಶಿಕ ಭಾಷೆಯಾಗಲಿ , ಸಿನಿಮಾ  ಸಂಸ್ಕ್ರುತಿ ಉಳಿಯಬ್ಬೆಕಾದರೆ  ಆಯಾ ಭಾಷೆಯಲ್ಲಿಯೀ  ಸೃಜನಶೀಲ ಅಭಿವ್ಯಕ್ತಿ ನಡೆದರೆ ಮಾತ್ರ ಅದು ಉತ್ಕೃಷ್ಟ ಮತ್ತದ್ದಾಗಿರಲು ಸಾದ್ಯ .ಹಾಗಾಗಿ  ನಾವು ಆಯಾ ಭಾಷೆಯ ಸಿನಿಮಾವನ್ನು ಆಯಾ ಭಾಷೆಯಲ್ಲಿಯೀ ನೂಡು ವುದೊಳಿತು .ಹಾಗು ಸಿನಿಮಾರಂಗ ದೊಡ್ಡ , ಉದ್ಯಮವಾಗಿದ್ದು  ,ಇದರಿಂದಾಗುವ ಹಣಕಾಸಿನ ವಹಿವಾಟು  ನಮ್ಮಲ್ಲೇ , ನಮ್ಮವರಿಗೇ ಲಾಭವಾಗುವಂತೆ  ಮಾಡಿ ಪ್ರೂತ್ಸಾಹಿಸಬೀಕಿದೆ . ನಮ್ಮವರ ಉದ್ಯಮವನ್ನು ಮೊದಲು ಪ್ರೋತ್ಸಾಹಿಸಬೀಕೆ  ಹೊರತು ಪರನಾದಿನವರನ್ನಲ್ಲ .
                                        ಈಗಾಗಲೇ ಬಂಡವಾಳಶಾಹಿಗಳು ಬಾರತೀಯ ಕೈಗಾರಿಕೆ, ಮಾರುಕಟ್ಟೆ ಯನ್ನು  ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿದ್ದು  ನಮ್ಮ ರಾಜಕೀಯ ನಾಯಕರ ನಿಲು ವುಗಳನ್ನ  ತಮ್ಮ ತಾಳಕ್ಕೆ ,ಅನುಕೂಲಕ್ಕೆ ತಕ್ಕಂತೆ ಕುಣಿಸುತ್ತಿರುವುದು ತಮಗೆಲ್ಲ ಗೊತ್ತಿದೆ , ನಮ್ಮ ಕನ್ನಡ ಸಿನೀಮಾ ಉದ್ಯಮ ಹಾಗಾಗದಿರಲಿ , ನಮ್ಮವರ ಉದ್ಯಮ ನಮ್ಮವರ ಹಿಡಿತದಲ್ಲೀ  ಇರಲಿ . ನಮಗೆ ನಮ್ಮದೇ  ಕನ್ನಡ ಕಂಪಿನ  ಸೃಜನ ಸಿನಿಮಾಗಳು  ಬರಲಿ .

Saturday, 1 September 2012

ಸಿನಿಮಾ ಮಾಯೆ ಹುಷಾರು ...

  ಸಿನಿಮಾ ಮಾಯೆ huಷಾರು  ...ಬಣ್ಣದ ಕನಸಿನ ಬಜಾರು ...

   ಇಂದು  ಸಿನಿಮಾ  ಹಲವು ಯುವಕ ಯುವತಿಯರು  ಬಯಸುವ    ಉದ್ಯೋಗ  ತಾಣವಾಗಿದ್ದು , ಕನಸ್ ಕಟ್ಟಿಕೊಂಡು  ಬೆಂಗಳುಉರಿಗೆ  ಬರುವ ಹಲವರನ್ನು ದಾರಿ  ತಪ್ಪಿಸುವ  ಗಾಂದಿನಗರದ  ಮಂದಿಗಳ ಸಂಕೆಯೂ ಹೆಚ್ಚುತ್ತಿದೆ . ಈ  ಕುರಿತು ಎಚ್ಚರ  ತಪ್ಪಿದರೆ ಬದುಕೀ  ಅಯೋಮಯ ...ಮಹಿಳೆಯರ   ದುರ್ಬಳಕೆ , ಲಿಂಗತಾರತಮ್ಯ   ಸದ್ದಿಲ್ಫ್ಲ್ದೆ ಏಲ್ಲಾ  ಗುಸು ಗುಸು .. ಪಿಸು ಪಿಸು.....
              
 ಸಿನಿಮಾಲೂಕ ನರಳುತ್ತ ನರಲಿಸುತ್ತಿರುವ  ಕಲೋದ್ಯಮವಾಗುವ್ ಅಪಾಯವಿದೆ ,  ಮಹಿಳೆಯರ  ಬಗ್ಗೆ ಧನಿಯೇತ್ತುವವ  ಮಹಿಳಾ ಆಯೋಗ  ಕಣ್ಣಿದ್ದು ಕುರುಡಾಗಿದೆ .ಮಹಿಳಾ ಸವೀದನೆ ಬಗ್ಗೆ ಧಲಿಯೇತ್ತುವ  ಕವಯತ್ರಿಯರು  ಅಸಹಾಯಕ್ರಾಗಿದ್ದ್ದಾರೆ.  ಬಣ್ಣದ ಬೆರಗೇ   ಹಾಗೆಯೇ ,,?
 

                ರೀಲು ಬದುಕು ,.. ಬಣ್ಣದ   ಝಾಳಕ್ಕು  , ಹಣದ ಮ್ಯಾಜಿಕ್ಕು  , ರಂಗಿನ  ಸೆಳಕು , ಆಸೆಯ   ಬದುಕು   ಸ್ಪರ್ದೆಯ  ಇಂ ದಿನ  ದಿನಗಳಲ್ಲಿ  ಬದುಕುಳಿಯಲು  ಯಾವುದನ್ನು  ಮಾಡಿದರೂ  ತಪ್ಪಲ್ಲ ವೆನಿಸುವ  ಬದಲಾದ ಜೀವನ ಶೈಲಿಯಲ್ಲಿ   ಸೃಜನಶೀಲತೆಯ  ಸಿನಿಮ್ಮಾ ಕಲೆ  ನರಳುತ್ತಿರುವುಡೀ ದುರಂತ .



  ಹಣಮಾದುವುದೇ  ಅಂತಿಮ  ಗುರಿಯಾಗಿ ರುವಾಗ   ಸೃಜನ್ಸೀಲತೆ ,ಕಲೆ ,  ಕನ್ನಡ  ಉಳಿವು  ಇವೆಲ್ಲ  ಸುಮ್ಮನೆ  ಹೇಳಲಿಕ್ಕಸ್ತೆ   . ಸಿನಿಮಾ  ಹಣ ಮಾಡುವ  , ಶೂಕಿಜೀವನ ದ  ಉದ್ಯೋಗ ವಾಗಿ ರೂಪಾನ್ತರವಾಗಿ ಟ್ಟಿದೆ .  ನೀವು  ಸಿನಿಮಾಕೆ  ಕಾಲಿಡ  ಬಯಸಿದ್ದಾರೆ  ಹುಷ್ಹರಾಗಿ  ಗಾಂದಿನಗರದ  ಮರಳು ಮಾತಿಗೆ  ಬಲಿಯಾಗಬೀಡಿ . ಜೋಕೆ ,....-  ನಿಮ್ಮಲ್ಲೋ  ಸಿನಿಮಾ  ಕನಸಿದ್ದರೆ  ಒಳ್ಳೆಯದೇ ಆದರೆ  ಅದು  ಸಮಾಜದಲೀ  ಉತ್ತಮ  ಪರಿಣಾಮ ಬಿರುವ ಕಲಾ ಸಿನಿಮಾವಾಗಲಿ . ಸೃಜನಶೀಲತೆಗೆ  ಜಯಸಿಗಲಿ .

                           ಜೈ   ಸಿನಿಮಾಯನ .. -ಇನ್ನಷ್ಟು  ಮುಂದೆ  ಮಾತನಾವುವ .... 
  


 ನಿಮ್ಮ  ಅನುಭವ , ಅಭಿಪ್ರಾಯ ವನ್ನ  ನಮ್ಮ  ಕಮೆಂಟ ನಲ್ಲಿ ಬರೀರೀ  ಗೆಳೆಯರೇ ,,!






Sunday, 5 August 2012

ಸಿನಿಮಾಗಳೇಕೆ ಹೀಗೆ .....ಮಹಿಳೆಯರನ್ನ .....ತೋರಿಸುತ್ತವೆ...!!


        ಹುಡುಗೀರ್ ಅಂದ್ರೆ   ಡೆನ್ಜರಪ್ಪೂ .......!
       
 .ಅನ್ನು ವ  ಸಿನಿಮಾಗಳು , ಹುಡುಗರ ಬಗ್ಗೆ  ಕನಿಕರ , ವಿಷಾದ  ವ್ಯಕ್ತ ಪಡಿಸುತ್ತವೆ . ಕಾರಣ ,,,?
              ಈ ಕುರಿತು  ಮಹಿಳಾ ಆಯೋಗ  ಮಾತಾಡುವುದಿಲ್ಲ   . ಮಹಿಳೆಯರು ಅಂತ ಸಿನಿಮಾದಲೀ ಅವಕಾಶ  ಸಿಕ್ಕಿದ್ದೇ ಪುಣ್ಯ ಎಂದು ನಿರ್ದೇಶಕ , ನಿರ್ಮಾಪಕರ , ನಟರ ಕೃಪೆಗೆ ಪಾತ್ರರಾಗಲು  ಎಲ್ಲದಕ್ಕೂ ಸಿದ್ದರಾಗಿ ಕ್ಯೂ ನಲ್ಲಿ ನಿಲ್ಲುತಾರೆ .ಏಕೆ ಹೀಗೆ ..?


   ಬಹುತೇಕ ಸಿನಿಮಾಗಳು ಕಲೆಯ ಹೆಸರಲ ಉದ್ಯಮಶೀಲವಾಗಿದ್ದು ,
 ದುದ್ದುಮಾಡುವುದೇ  ದಂಧೆಯಾಗಿದೆ . ಎಲ್ಲರಿಗೂ ದೊಡ್ದೊಂದೇ ಸಾಕು , ಅದನ್ನು ನೋಡಿದ ಸಮಾಜ ಏನಾದರೇನು..?  ಶಾಲಾ ಮಕ್ಕಳೇ  ಮನೆ ತೊರೆದು ಓದಿ ಹೋದರೇನು , ಸ್ತ್ರ್ರೀ ಸ್ವಾತಂತ್ರದ  ಹೆಸರಿನ ಕೆಸರಿನಲ್ಲಿ ಯಾರದೂ ಜೇಬು ತುಂಬಿದರೆ ಸಾಕಷ್ಟೇ ... !
               




 ಇತೀಚಿನ  ಬಹುತೇಕ ಸಿನೀಮಗಳು      ಪ್ರೀತಿ ವಿಷಯದಲಿ , ಸಂಸಾರ ವಿಷಯದಲಿ ಹೆಣ್ಣಿನ ತಪ್ಪನ್ನಸ್ಟೇ ದೊಡ್ಡದು  ಮಾಡಿ ತೋರಿಸುತ್ತವೆ .  ಯಾಕೆ . ಬಹುತೇಕ ಸಿನಿಮಾ ನೋಡುಗರು ಹುದುಗರಾಗಿದ್ದು  ಅವರಾನ್ನು ಖುಷಿಪಡಿಸಿ ಟಾಕೀಸಿಗೆ ಕರೆ ತರುವ  ಉದ್ದೇಶವ ಆ ಮೂಲಕ ತಮ್ಮ ಜೀಬು ತುಮ್ಬಿಸಿಕೂಳ್ಳುವ  ಸ್ವಾರ್ಥ . ಇದರಿಂದಾಗುವ ಸಮಾಜದ ಅಸ್ವಾಸ್ಥದ  ಬಗ್ಗೆ ಅವ್ರಿಗೀಕೆ  ಚಿಂತೆ ಹಾಳಾಗುವವ್ರನ್ನು ಹಿಡಿಯಲಾದೀತೇ ...? ಎಂಬ ಉತ್ತರ ,,!



     ಈ ಕುರಿತು ಶಾಲಾ ಶಿಕ್ಷಣ ಎಚ್ಚರಿಸುವುದಿಲ್ಲ ...!  ಪೋಷಕರು ಅಸಾಹಯಕರು . ಬುದ್ದಿಜೀವಿಗಳ ಮಾತು ಯಾರಿಗೂ ಬೇಡವಾಗಿದೆ. ಸಿನಿಮಾ ಲೋಕದವರಿಗೆ  ಗೆಲ್ಲುವುದೇ ಮುಖ್ಯ .  









ಯಾರು ಓದಿ ಹೋದರೆ ಯಾರಿಗೇನು ,,, ಹಿಡಿಯಲಾದೀತೆ ,,, ಅವರಿಗೂ ಸ್ವಾತಂತ್ರವಿದೆ . 


"ವಿನಾಶ ಕಾಲಕ್ಕೆ ವಿಪರೀತ ಬುದ್ದಿ "


     "  ಹುಡುಗಿ ಹಿಂದೆ ಹೋದರೆ ಗೋಳು "    ಅನ್ನೋರಿಗೆ               "  ಬಾಳೂ ಇದೆ "    ಎಂಬುದನ್ನು ಮರೆತಿರಬೇಕು . 


ಹುಡುಗರ  ಹಿಂದೆ ಹೋಗಿ  ಹಾಳಾದ  ಹೆಣ್ಗಳ  ಸಂಖೆಯನ್ನು  


  ಮರೆಮಾಚುತ್ತಿದೆ ಜಗತ್ತು .  ಆ  ಬಗ್ಗೆ   ಸಿನಿಮಾಗಳು  ಮೌನ  . !!!


ಪ್ರೀತಿ  ಮಧುರ  ,ಪ್ರೇಮ  ಬದುಕಿಗೆ  ಶ್ರುಂಗಾರ , ನಿಸರ್ಗವೇ ಅದನ್ನು ಕಲಿಸುತ್ತದೆ . 

ಆದರೆ  ಅದರ ಹೆಸರಲ್ಲಿ  ಅತಿರಂಜನೆ , ಬ್ರಾಮಾಲೋಕ  ಸೃಷ್ಟಿ  ಒಳ್ಳೆಯದಲ್ಲ . ಆಲ್ಲಿ  ಹೆಣ್ಣಿನ  ಶೋಷಣೆ   ನಡೆಯುತ್ತಿರುವುದು ವಿಪರ್ಯಾಸ ವೇ  ಸರಿ .ಅವರೇನು ನಮ್ಮ ಮನೆಯವರಲ್ಲ  ಎಂದು ಬಾಯಿ ಕಳೆದುಕೊಂಡು   ನೋಡುವುದು ಮೊರ್ಖತನ ವೇ   ಸರಿ .ಇಂದು ಅವರು ನಾಳೇ,,,,,,???     


ಮೂನ್ನೆ   ,,ರೈಲಿನಲ್ಲಿ ...,  ಹೂಮ್ಫ್ ಸ್ಥ್ವೆ ಗಳಲ್ಲಿ .... ,, ಹಿಂದೆ  ಅದ್ಯಾವುದೂ  ಕಾಲೇಜಿನಲ್ಲಿ  ,,,, ಶೂಟಿಂಗ್ನಲ್ಲಿ ......  ,,,,ನಡಿಯುತ್ತಲೀಯಿದೆ .  ಎಚ್ಚರಾಗಿಲ್ಲ ... ಎಚ್ಹಾರಿಸಿದರೆ  ಅವರ   ಮೇಲೆಯೇ ಗೂಬೇ  ಕೂರಿಸುವ ಜನ  ,,!   


ಎಲ್ಲ  ಸಿನಿಮಾಯಣ  ಸ್ವಾಮಿ ,, ಸಿನಿಮಾಯಾಣ !    ಏನಂತೀರಿ ,,, ??